
ರಾಮನೆಂಬೋ ನಾಮವ ನೆನೆದರೆ (ಭಜನೆ)
ಕ್ಲಿಕ್ ಮಾಡಿ ಸಾಹಿತ್ಯ ನೋಡಿ | Click to view Lyrics
ಕನ್ನಡ ಸಾಹಿತ್ಯ (Kannada) ▼
ರಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಾಗಕೆ
ಶ್ರೀಮನ್ ನಾರಾಯಣ ಜಾಗಕೆ || PA ||
ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ |
ಬೆತ್ತವ ಬೆನ್ನಲಿ ಪೊಟ್ಟಿದ ರಾಮ ಕೂರ್ಮಾವತಾರಕ್ಕೆ || 1 ||
ಭೂಮಿಯ ಪೊಟ್ಟು ನೀರೊಳು ಮುಳುಗಿದ ವರಾಹವತಾರಕ್ಕೆ |
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದನಸಲಹುದಕೆ || 2 ||
ಭೂಮಿಯದಾನವ ಬೇಡಿದ ರಾಮ ವಾಮನವತಾರಕ್ಕೆ |
ತಾಯಿಯ ಶಿರವನು ಅಳಿದನು ರಾಮ ಭಾರ್ಗವತಾರಕ್ಕೆ || 3 ||
ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ |
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ || 4 ||
ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರರ ಸಲಹುದಕ್ಕೆ |
ವಾಹನ ಬಿಟ್ಟು ತುರಗವ ನೇರಿದ ಕಲ್ಯವತಾರಕ್ಕೆ || 5 ||
ಶ್ಯಾಮಲ ವರ್ಣವ ತಾಳಿದ ರಾಮ ಸಾಮರ್ಥ್ಯನು ಜಗಕೆ |
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ || 6 ||
English Lyrics (Transliteration) ▼
Ramanembo Namava Nenedare Bhayavilla Manake
Muru Lokake Karana Karta Narayana Jagake
Shriman Narayana Jagake || PA ||
Matsyavatarava Talida Rama Vedava Taruvadake |
Bettava Bennali Pottida Rama Kurmavatarakke || 1 ||
Bhumiya Pottu Nirolu Mulugida Varahavatarakke |
Karulanu Bagedu Maleya Dharisida Prahladanasalahudake || 2 ||
Bhumiyadanava Bedida Rama Vamanavatarakke |
Tayiya Shiravanu Alidanu Rama Bhargavatarakke || 3 ||
Vanavasava Madida Rama Janakana Vakyakke |
Mava Kamsana Kondanu Krishna Tayiya Bidisalikke || 4 ||
Satiyara Vratagala Kedisida Rama Tripurara Salahudakke |
Vahana Bittu Turagava Nerida Kalyavatarakke || 5 ||
Shyamala Varnava Talida Rama Samarthyanu Jagake |
Swami Shri Purandara Vitthalanu Rama Govindanu Jagake || 6 ||
