
☀️
ಮುದ್ದು ರಾಮರ ಬಂಟ
ಜೈ ಶ್ರೀ ರಾಮ್ | ಜೈ ಹನುಮಾನ್
🕉️ ಕನ್ನಡ ಸಾಹಿತ್ಯ (Kannada) ↴
ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ || PA ||
ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ-
ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ || A PA ||
ದಾರಿ ದೂರವೆಂದು ದಾರಿಯನೆ ನಿರ್ಮಿಸಿದ
ಧೀರ, ರಾಮರ ಬಂಟ ಹನುಮಂತನೆ | ನೋಡಿ-
ಬಾರೆಂದರೆ ಪೋಗಿ ಲಂಕೆಯ ಸುಟ್ಟು
ಬೇಗದಲಿ ಮರವನೇರಿ ಕುಳಿತಾತನೆ || 1 ||
ಅಶೋಕ ವನದಲ್ಲಿ ಸೀತೆಯನು ನೋಡಿದ
ಶ್ರೀರಾಮರ ಬಂಟ ಹನುಮಂತನೆ |
ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿ
ತಿಳಿಸಿದ ರಘುವೀರ ದೂತ ಜಾಣ ನಿವನೆ || 2 ||
ಆತನ ಮಾತಿಗೆ ಸೇತುವೆನೆ ಕಟ್ಟಿಸಿದ
ಸೀತಾರಾಮರ ಬಂಟ ಹನುಮಂತನೆ |
ಸೀತಾದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ
ಮುಖ್ಯಪ್ರಾಣ ಹಯವದನನ ದೂತನೆ || 3 ||
📜 English Lyrics ↴
Muddu Ramara Banta
Buddhiyulla Hanumanta
Haddagi Haridane Akashake || PA ||
Nidre Gaiva Samayadi Eddu Barendare A-
Lliddya Rakkasaranella Gelidatane || A PA ||
Dari Duravendu Dariyane Nirmisida
Dhira, Ramara Banta Hanumantane | Nodi-
Barendare Pogi Lankeya Suttu
Begadali Maravaneri Kulitatane || 1 ||
Ashoka Vanadalli Siteyanu Nodida
Shriramara Banta Hanumantane |
Mateyanu Matadisi Kshema Suddi
Tilisida Raghuvira Duta Jana Nivane || 2 ||
Atana Matige Setuvene Kattisida
Sitaramara Banta Hanumantane |
Sitadevi Ammanige Pritiya Bantanada
Mukhyaprana Hayavadanana Dutane || 3 ||


